ಹಣ್ಣು ಕಾಯಿ ಮದುವೆ

This page features a video of the poem “ಹಣ್ಣು ಕಾಯಿ ಮದುವೆ (Hannu Kayi Maduve)”, prescribed under the Karnataka State Syllabus for 4th Standard Kannada Second Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಹಾಗಲಕಾಯಿಗೂ ಮಾವಿನ ಹಣ್ಣಿಗೂ ಮದುವೆ ನಡೆದಿತ್ತು
ಛತ್ರದ ತುಂಬ ತರಕಾರಿ ಹಣ್ಣಿನ ಗುಂಪೇ ತುಂಬಿತ್ತು

ಬಾಳೆಗೊನೆ ಬಾಗಿ ನಮಿಸಿ ಸ್ವಾಗತ ಅಂತಿತ್ತು
ಡೊಳ್ಳುಹೊಟ್ಟೆ ಕುಂಬಳಕಾಯಿ ಡೋಲು ಬಾರ್ಸಿತ್ತು

ಸೋರೆಕಾಯಿ ಸೊಗಸಾಗಿ ವಾಲಗ ಊದ್ತಿತ್ತು
ತೆಂಗಿನಕಾಯಿ ಹೋಳುಗಳೆರಡೂ ತಾಳ ಹಾಕ್ತಿತ್ತು

ಪಿಳ್ಳೆ ಜುಟ್ಟಿನ ಬದನೆಕಾಯಿ ಮಂತ್ರ ಹೇಳ್ತಿತ್ತು
ಕೆಂಪುಮೂತಿ ಮೆಣಸಿನಕಾಯಿ ಹೋಮ ಮಾಡ್ತಿತ್ತು
ಗಂಡು ಹೆಣ್ಣು ಹೊಗೆ ತಾಳದೆ ಕಣ್ಣೀರ್ ಹಾಕ್ತಿತ್ತು
ಹೀರೇಕಾಯಿ ಅದನು ನೋಡಿ ನಕ್ಕು ನಲಿತಿತ್ತು

ಬಾಳೆಕಾಯಿ ಬಾಗಿಬಾಗಿ ಎಲೆ ಹಾಕ್ತಿತ್ತು
ಹುರುಳಿಕಾಯಿ ಊಟಕ್ಕೇಳಿ ಅಂತ ಕೂಗ್ತಿತ್ತು
ಸೌತೆಕಾಯಿ ಲೋಟಕ್ಕೆಲ್ಲ ನೀರು ಹಾಕ್ತಿತ್ತು
ಆಲೂಗಡ್ಡೆ ಎಲೆತುಂಬ ಊಟ ಬಡಿಸ್ತಿತ್ತು

ಪಡುವಲಕಾಯಿ ಬಳುಕಿ ಬಳುಕಿ ವೀಳ್ಯ ಕೊಡ್ತಿತ್ತು
ತೊಂಡೆಕಾಯಿ ತಾಂಬೂಲ ಕೊಟ್ಟು ಟಾ ಟಾ ಹೇಳ್ತಿತ್ತು
ಅಂತು ಇಂತು ಸಿಹಿಗೂ ಕಹಿಗೂ ಮದುವೆ ಆಗಿತ್ತು
ಮಾವಿನಹಣ್ಣು ಹಾಗಲಕಾಯಿ ಜೋಡಿಯಾಗಿತ್ತು
Summary
ಈ ಪದ್ಯವು ಹಾಗಲಕಾಯಿ ಮತ್ತು ಮಾವಿನಹಣ್ಣಿನ ಮದುವೆಯನ್ನು ಕಲ್ಪಿಸಿಕೊಂಡು ತರಕಾರಿಗಳು ಮತ್ತು ಹಣ್ಣುಗಳನ್ನು ಮನುಷ್ಯರಂತೆ ಚಿತ್ರಿಸುತ್ತದೆ. ಬಾಳೆಗೊನೆ ಸ್ವಾಗತ ಮಾಡುವಂತೆ, ಕುಂಬಳಕಾಯಿ ಡೋಲು ಬಾರಿಸುವಂತೆ ಮತ್ತು ಸೋರೆಕಾಯಿ ವಾಲಗ ಊದುವಂತೆ ಮದುವೆಯ ಸಂಭ್ರಮವನ್ನು ತೋರಿಸಲಾಗಿದೆ. ತೆಂಗಿನಕಾಯಿ ತಾಳ ಹಾಕುತ್ತದೆ ಮತ್ತು ಬದನೆಕಾಯಿ ಮಂತ್ರ ಹೇಳುತ್ತದೆ. ವಿವಿಧ ತರಕಾರಿಗಳು ಊಟ ಬಡಿಸುವುದು, ನೀರು ಕೊಡುವುದು ಮತ್ತು ತಾಂಬೂಲ ನೀಡುವುದು ಮುಂತಾದ ಮದುವೆಯ ಕೆಲಸಗಳನ್ನು ಮಾಡುತ್ತವೆ. ಕೊನೆಯಲ್ಲಿ ಸಿಹಿಯಾದ ಮಾವಿನಹಣ್ಣು ಮತ್ತು ಕಹಿಯಾದ ಹಾಗಲಕಾಯಿ ಜೋಡಿಯಾಗಿ ಮದುವೆಯಾಗುವ ಹಾಸ್ಯಮಯ ಕಲ್ಪನೆಯ ಮೂಲಕ ಪದ್ಯವು ಮಕ್ಕಳಿಗೆ ಮನರಂಜನೆ ನೀಡುತ್ತದೆ.
Author
ಕವಿ: ವೈ.ಎಸ್. ಕೃಷ್ಣಮೂರ್ತಿ