ಸಾವಿರ ಕಂಬಗಳಾಗೋಣ

This page features a video of the poem “ಸಾವಿರ ಕಂಬಗಳಾಗೋಣ (Savira Kambagalagona)”, prescribed under the Karnataka State Syllabus for 4th Standard Kannada Second Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಭಾರತ ಮಾತೆಯ ಮಂದಿರಕೆ
ಸಾವಿರ ಕಂಬಗಳಾಗೋಣ.

ಭರತ ಭೂಮಿಯ ರಕ್ಷಣೆಗೆ
ಕೋಟಿ ಸೈನಿಕರಾಗೋಣ.
ಕೋಟಿ ಸೈನಿಕರಾಗೋಣ.

ವಿಶ್ವ ಜೀವನವೆ ನಮ್ಮ ಜೀವನವು
ವಿಶಾಲ ಹೃದಯಿಗಳಾಗೋಣ.

ಎಲ್ಲಾ ದೇಶಕು ಎಲ್ಲ ಕಾಲಕು
ಸಾಧನೆ ಸಫಲತೆ ಹಂಚೋಣ.
ಸಾಧನೆ ಸಫಲತೆ ಹಂಚೋಣ.

ಸ್ವಾಭಿಮಾನದ ಸಾರ್ಥಕ ಬದುಕಿನ
ಮಾನವತೆಯನು ಮೆರೆಯೋಣ.

ಒಂದೇ ಮನದ ಒಂದೇ ಧ್ವನಿಯ
ರಾಷ್ಟ್ರವ ಕಟ್ಟುತ ನಲಿಯೋಣ.
ರಾಷ್ಟ್ರವ ಕಟ್ಟುತ ನಲಿಯೋಣ.

ಬಗೆಬಗೆ ಬಣ್ಣದ ಹೂದಳದಂತೆ
ವೈವಿಧ್ಯವನು ಬೆಳೆಸೋಣ.

ಸಮತೆಯ ದೀಪ ಬೆಳಗೋಣ
ಪ್ರೀತಿ-ಮಮತೆಗಳ ಬಿತ್ತೋಣ.
ಪ್ರೀತಿ-ಮಮತೆಗಳ ಬಿತ್ತೋಣ.

ದ್ವೇಷ-ಅಸೂಯೆ ತೊರೆಯೋಣ
ಬಲಿಷ್ಠ ಭಾರತ ಕಟ್ಟೋಣ.

ಭಾರತ ಮಾತೆಯ ಮಂದಿರಕೆ
ಸಾವಿರ ಕಂಬಗಳಾಗೋಣ.

ಭರತ ಭೂಮಿಯ ರಕ್ಷಣೆಗೆ
ಕೋಟಿ ಸೈನಿಕರಾಗೋಣ.
ಕೋಟಿ ಸೈನಿಕರಾಗೋಣ.
Summary
ಈ ಗೀತೆಯು ಭಾರತವನ್ನು ಬಲಿಷ್ಠ ಮತ್ತು ಮಾನವೀಯ ರಾಷ್ಟ್ರವನ್ನಾಗಿ ನಿರ್ಮಿಸುವ ಕರೆಯನ್ನು ನೀಡುತ್ತದೆ. ದೇಶದ ರಕ್ಷಣೆಗೆ ಪ್ರತಿಯೊಬ್ಬರೂ ಸಿದ್ಧರಾಗಬೇಕು ಮತ್ತು ಭಾರತಮಾತೆಯ ಮಂದಿರಕ್ಕೆ ಸಾವಿರ ಕಂಬಗಳಂತೆ ನಿಲ್ಲಬೇಕು ಎಂದು ಗೀತೆ ಹೇಳುತ್ತದೆ. ವಿಶ್ವದ ಜೀವನವನ್ನೇ ನಮ್ಮ ಜೀವನವೆಂದು ಭಾವಿಸಿ ವಿಶಾಲ ಹೃದಯದಿಂದ ಬದುಕಬೇಕು. ಸಾಧನೆ ಮತ್ತು ಯಶಸ್ಸನ್ನು ಎಲ್ಲ ದೇಶಗಳಿಗೂ ಎಲ್ಲ ಕಾಲಗಳಿಗೂ ಹಂಚಿಕೊಳ್ಳುವ ಮನೋಭಾವ ಬೆಳೆಸಬೇಕು. ದ್ವೇಷ ಮತ್ತು ಅಸೂಯೆಯನ್ನು ತೊರೆದು ಸಮತೆ, ಪ್ರೀತಿ ಮತ್ತು ಮಮತೆಯನ್ನು ಬೆಳೆಸಿದರೆ ಬಲಿಷ್ಠ ಭಾರತವನ್ನು ಕಟ್ಟಬಹುದು.
Author
ಕವಿ: ಆನೇಕಲ್ ಕೃಷ್ಣಮೂರ್ತಿ ಕಾಟಿ