ಬಲಿಯನಿತ್ತೊಡೆ ಮುನಿವೆಂ

This page features a video of the poem “ಬಲಿಯನಿತ್ತೊಡೆ ಮುನಿವೆಂ (Baliyanittode Muniven)”, prescribed under the Karnataka State Syllabus for 9th Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಆನಭಯರುಚಿಕುಮಾರನೆ
ಈ ನೆಗೞ್ದಿರ್ದಭಯಮತಿಯುಮೀ ಅಕ್ಕನೆ ದಲ್
ನಾನಾ ವಿಧ ಕರ್ಮದಿನಿ
ನ್ನೇನಂ ನೀನ್ ಕೇಳ್ವೆ ಮಾರಿದತ್ತನೃಪೇಂದ್ರಾ

ಗುರುವಿಂದು ಬೆಸಸೆ ಭಿಕ್ಷೆಗೆ
ಬರುತಿರೆ ಪಿಡಿತಂದರೆಮ್ಮನಾ ದೆಸೆಗೆ ಭಯಂ
ಪುರುಳಿಲ್ಲ ನಿನ್ನ ಕೇಡಂ
ಪರಿವೀಕ್ಷಿಸಿ ಕರುಣದಿಂದೆ ತಲ್ಲಣಿಸಿದಪೆಂ

ಸಂಕಲ್ಪಹಿಂಸೆಯೊಂದಱೊ-
ಳಾಂ ಕಂಡೆಂ ಭವದ ದುಃಖಮುಂಡೆಂ ನೀನ್ ನಿಃ
ಶಂಕತೆಯಿನಿನಿತು ದೇಹಿಗ -
ಳಂ ಕೊಂದಪೆ ನರಕದೊಳ್ ನಿವಾರಣೆವಡೆವಯ್

ಎಂದ ನುಡಿ ನೆರೆದ ಜೀವಕ -
ದಂಬಂಗಳ್ಗಭಯಮೆಂಬ ಡಂಗುರದವೊಲೊ-
ಪ್ಪಂಬಡೆಯೆ ಮಾರಿದತ್ತನೃ-
ಪಂ ಬಿಲ್ಲುಂ ಬೆ¾ಗುಮಾದನುದ್ವೇಗಪರಂ

ಆ ಚಂಡಮಾರಿ ಲೋಚನ
ಗೋಚರತನುವಾಗಿ ಕುವರನಂ ಬಂದಿಸಿ ನೀ-
ನಾಚಾರ್ಯನೆಯೆಂದಿಂತಿರೆ
ಸೂಚಿಸಿದಳ್ ನೆರೆದ ಜಾತ್ರೆ ನೆಱೆ ಕೇಳ್ವಿನೆಗಂ

ಪ್ರಜೆಯೆಲ್ಲಂ ಜಲಗಂಧ
ಸ್ರಜ ತಂಡುಲ ಧೂಪ ದೀಪ ಚರು ತಾಂಬೂಲ
ವ್ರಜದಿಂ ಪೂಜಿಸುವುದು ಜೀವಜಾತದಿಂದೆನಗೆ ಬಲಿಯನಿತ್ತೊಡೆ ಮುನಿವೆಂ

ಎಂದು ತಿರೋಹಿತೆಯಾದೊಡೆ
ತಂದಿರಿಸಿದ ಜೀವರಾಶಿಯಂ ಬಿಡಿಸಿ ಜನಾ-
ನಂದನರಂ ತನ್ನನುಜೆಯ
ನಂದನರಂ ಮಾರಿದತ್ತವಿಭು ಲಾಲಿಸಿದಂ

ಗುಡುಗುಡನೆ ಸುರಿವ ಕಣ್ಬನಿ-
ಯೊಡವಂದಶುಭಕ್ಕೆ ಮಂಗಲಸ್ನಾನಮನಂ
ದೊಡರಿಸೆ ಸೋದರಶಿಶುಗಳ-
ನೊಡಲೊಳ್ ಮಡಗುವಿನಮಪ್ಪಿ ಬೆಚ್ಚನೆ ಸುಯ್ದಂ

ತಾನಂದುವರೆಗಮೊದವಿಸಿ-
ದೇನಂಗಳ್ಗಳ್ಕಿ ಕುಸುಮದತ್ತಂಗೆ ಧರಿತ್ರೀನಾಥಪದವಿಯಂ ಕೊಟ್ಟಾ ನರಪತಿ ಬೞಿಕ ದೀಕ್ಷೆಯಂ ಕೈಕೊಂಡಂ
ಕೆಲಕಾಲಮುಗ್ರತಪಮಂ

ಸಲಿಸಿ ಸಮಾಧಿಯೊಳೆ ಮುಡಿಪಿ ಮೂ¾ನೆಯ ದಿವಂ
ನೆಲೆಯಾಗೆ ಮಾರಿದತ್ತಂ
ಕಲಿಯಂ ಮೂದಲಿಸಿದಂತೆ ದೇವನೆ ಆದಂ
Summary
ಈ ಕಾವ್ಯಭಾಗವು ಮಾರಿದತ್ತನಿಗೆ ಸಂಬಂಧಿಸಿದ ಅಸಾಮಾನ್ಯ ಘಟನೆಯನ್ನು ವಿವರಿಸುತ್ತದೆ. ಭಯಂಕರ ಪರಿಸ್ಥಿತಿಯಲ್ಲಿ ಜೀವಿಗಳಿಗೆ ಅಭಯ ನೀಡುವ ಕರುಣೆಯ ಮನೋಭಾವವು ರಾಜನ ನಡೆಗೆ ಪರಿಣಾಮ ಬೀರುತ್ತದೆ. ಜೀವಬಲಿಯ ಬದಲು ಜೀವಿಗಳನ್ನು ಬಿಡುಗಡೆ ಮಾಡುವ ಮಾನವೀಯ ನಿರ್ಧಾರ ಇಲ್ಲಿ ಮುಖ್ಯವಾಗುತ್ತದೆ. ನಂತರ ಮಾರಿದತ್ತನು ಕುಟುಂಬವನ್ನು ಪ್ರೀತಿಯಿಂದ ನೋಡಿಕೊಂಡು ರಾಜ್ಯದ ಜವಾಬ್ದಾರಿಯನ್ನು ಮತ್ತೊಬ್ಬರಿಗೆ ಒಪ್ಪಿಸಿ ತಪಸ್ಸಿನ ಮಾರ್ಗವನ್ನು ಆರಿಸಿಕೊಳ್ಳುತ್ತಾನೆ. ಕರುಣೆ, ಜೀವದಯೆ, ತ್ಯಾಗ ಮತ್ತು ಆತ್ಮೋನ್ನತಿಯ ಮೂಲಕ ಜೀವನವನ್ನು ಉನ್ನತಗೊಳಿಸಬಹುದು ಎಂಬ ಸಂದೇಶ ಈ ಭಾಗದಲ್ಲಿದೆ.
Author
ಕವಿ: ಎಲ್. ಕೆ. ಕಂಬಾರ