ಹೇಮಂತ

This page features a video of the poem “ಹೇಮಂತ (Hemanta)”, prescribed under the Karnataka State Syllabus for 9th Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಹೇಮಂತ ಋತುರಾಜನಿಳೆಗೆ ಬಂದಿಳಿವಂದು
ಹೂವಿಲ್ಲ ಹಸುರಿಲ್ಲ ಚಿಗುರೆಲೆಗಳಿಲ್ಲ.
ದುಂಬಿಗಳ ದನಿಯಿಲ್ಲ ಹಕ್ಕಿಗಳ ಹಾಡಿಲ್ಲ
ಕುಸುಮ ಗಂಧವ ತರುವ ಮರುತನಿಲ್ಲ.

ಚೆಂಗುಡಿಯ ಸಿಂಗರದ ವರ ವರೂಥಗಳೆನಿಸಿ
ಮೆರೆವ ಮರಗಿಡ ಬಳ್ಳಿ ಬರಿದೆ ಮೊಗವಿಳುಹಿ
ಮೌನದಲಿ ಮೈದೆಗೆದು ಮನಮುರಿದು ನಿಂದಿಹವು
ಭಾಗ್ಯ ಹೀನರವೋಲು ದೀನರೆಂದೆನಿಸಿ.

ಮಂಜು ಮುಸುಕನು ಹೊದ್ದು ಹೊಲಗದ್ದೆಗಳು ಮಲಗಿ
ಸುಯ್ಯೆಲರ ಸೂಸುತಿವೆ ನಿನ್ನ ಹಳಿದು
ಮೆಲ್ಲಮೆಲ್ಲನೆ ಸರಿದು ಮೊಗದ ಜವನಿಕೆಯೆಳೆದು
ತುಂಗೆ ತೊರೆ ಹರಿಯುತಿದೆ ನಡುಗಿ ಮೈನೆನೆದು.

ಹಣ್ಣೆಲೆಗಳುದುರುತಿಹ ಬರಲು ಮರಗಳನೇರಿ
ಕಣ್ಣೀರು ಸುರಿಸುತಿದೆ ಕಾನನದ ಹಕ್ಕಿ.
ತಣ್ಣನೆಯ ಗಾಳಿಯಲಿ ಹಿಮದೊಂದು ಸೋನೆಯಲಿ
ಮಿಣ್ಣನಿದೆ ಮಾನವನ ಜೀವ ಸೆರೆ ಸಿಕ್ಕಿ.

ಎತ್ತಲುಂ ಬಿಳಿಮಂಜು ಎತ್ತಲುಂ ಹಿಮಗಾಳಿ
ಎತ್ತಲುಂ ನಡುಗುತಿಹ ನೀರವಾಲೋಕ!
ಎತ್ತಲುಂ ಬರಡುಬನವೆತ್ತಲುಂ ಜಡದ ಜನ
ಎತ್ತಲುಂ ಶೂನ್ಯ ಮನಮರುಗುತಿಹ ಮರುಕ.

ಹೇಮಂತನಾಳಿಕೆಯ ಕಠಿಣ ಶಾಸನವಿಂತು
ಅದಕೆ ತಲೆವಾಗುವುದೆ ಸೃಷ್ಟಿಯೊಳಮರ್ಮ.
ಒಂದೊಂದು ಋತುವಿನಲಿ ಒಂದೊಂದು ರೀತಿಯಲಿ
ಸಂಸ್ಕಾರ ಪಡೆಯುವುದೆ ಜೀವಗಳ ಧರ್ಮ.
Summary
ಈ ಕವನವು ಹೇಮಂತ ಋತುವಿನ ಆಗಮನದಿಂದ ಪ್ರಕೃತಿಯಲ್ಲಿ ಉಂಟಾಗುವ ಬದಲಾವಣೆಯನ್ನು ಚಿತ್ರಿಸುತ್ತದೆ. ಹೂವುಗಳು, ಹಸಿರು ಚಿಗುರೆಲೆಗಳು, ದುಂಬಿಗಳ ದನಿಯು ಮತ್ತು ಹಕ್ಕಿಗಳ ಹಾಡು ಇಲ್ಲದೆ ಪ್ರಕೃತಿ ಮೌನವಾಗಿ ಕಾಣುತ್ತದೆ. ಮಂಜು ಹೊದ್ದ ಹೊಲಗದ್ದೆಗಳು ಮಲಗಿರುವಂತೆ ಕಾಣುತ್ತವೆ ಮತ್ತು ತಂಪಾದ ಗಾಳಿಯಲ್ಲಿ ನದಿಯೂ ನಡುಗುವಂತೆ ಕವಿ ವರ್ಣಿಸುತ್ತಾನೆ. ಹಣ್ಣೆಲೆಗಳು ಉದುರುವ ಕಾಡು ಮತ್ತು ಚಳಿಯಿಂದ ನಡುಗುವ ಜೀವಿಗಳು ಋತುವಿನ ಕಠಿಣತೆಯನ್ನು ತೋರಿಸುತ್ತವೆ. ಆದರೂ ಪ್ರತಿಯೊಂದು ಋತುವಿನಲ್ಲೂ ಜೀವಿಗಳು ವಿಭಿನ್ನ ರೀತಿಯ ಸಂಸ್ಕಾರ ಪಡೆಯುತ್ತವೆ ಎಂಬ ಪ್ರಕೃತಿಯ ನಿಯಮವನ್ನು ಕವನ ಒಪ್ಪಿಕೊಳ್ಳುತ್ತದೆ.
Author
ಕವಿ: ಎಸ್. ವಿ. ಪರಮೇಶ್ವರ ಭಟ್ಟ