ಹರಲೀಲೆ

This page features a video of the poem “ಹರಲೀಲೆ (Haralile)”, prescribed under the Karnataka State Syllabus for 9th Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಇಂತು ಮಣಮಂದ ಪುತ್ತೂರ್ಗೆ ನಡೆವುತ್ತಮಿರೆ
ಮುಂತೊರ್ವನೆಯ್ತಂದು ಬಿನ್ನಪವೆನುತ್ತಮಿರೆ|

ದೇವ ಲಗ್ನದ ಮುಹೂರ್ತಂ ಬರಂ ಬನದೊಳಗೆ
ದೇವ ಸುಖದಿಂದಿರ್ಪುದೀವೂರ ಬನದೊಳಗೆ|

ಎನೆ ತಿರುಗಿ ನಡೆದುದಾ ವನದತ್ತ ಮುಂತಾಗಿ
ತನತನಗೆ ಮುಯ್ಯಾನುತಾನಂದಮಯರಾಗಿ|

ಬಂದು ಬನಮಂ ಪೊಕ್ಕು ಮಿಕ್ಕು ಸಂತೋಷದಿಂ
ಮುಂದೆ ಸಿಂಹಾಸನವನಿಕ್ಕಲು ವಿಲಾಸದಿಂ-|

ದೆಸೆಯೆ ಕುಳ್ಳಿರ್ದನಾ ಸುಕುಮಾರ ಸೌಂದರಂ
ವಸುಧೆಗೊಪ್ಪುವ ಮರ್ತ್ಯಮಂಡಲಪುರಂದರಂ|

ಮುಗಿದಿರ್ದ ನೈದಿಲುಗೊಳಂಗಳಂ ನೋಡುತುಂ
ಮಿಗೆ ಬಳಲುವಾ ಚಕೋರಂಗಳಂ ಕಾಣುತುಂ|

ರಸಫಳಂಗಳನ¾ಸುತಿರ್ಪ ಶುಕನಿಕರಮಂ
ಪೊಸಪೂವನೆಳಸಿರ್ಪ ಮಧುಕರಪ್ರಕರಮಂ|

ನೋಡುತುಂ ಕೊಂಡಾಡುತಿರ್ದನಾ ವನದೊಳಗೆ
ಆಡಿಸುತೆ ಪಾಡಿಸುತಮಿರ್ದನಾ ವನದೊಳಗೆ|

ಇಂತು ಮುದದಿಂ ನಲಿವುತರಸುಮಗನೊಪ್ಪಿದಂ
ಸಂತತಂ ವನದೊಳಗೆ ಸುಕುಮಾರನೊಪ್ಪಿದಂ|
Summary
ಈ ಕಾವ್ಯಭಾಗದಲ್ಲಿ ಸುಕುಮಾರನು ಉದ್ಯಾನವನಕ್ಕೆ ತೆರಳಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಆನಂದಿಸುವ ದೃಶ್ಯವನ್ನು ಚಿತ್ರಿಸಲಾಗಿದೆ. ವನದೊಳಗೆ ಅವನಿಗೆ ಸಿಂಹಾಸನವನ್ನು ಏರ್ಪಡಿಸಿ ಗೌರವದಿಂದ ಕುಳ್ಳಿರಿಸಲಾಗುತ್ತದೆ. ಅರಳಿದ ನೈದಿಲು ಹೂಗಳು, ಚಕೋರಗಳು, ಹಣ್ಣು ತಿನ್ನುವ ಗಿಳಿಗಳು ಮತ್ತು ಹೊಸ ಹೂಗಳ ಸುತ್ತಲೂ ಗುನುಗುವ ದುಂಬಿಗಳು ಅವನ ಗಮನ ಸೆಳೆಯುತ್ತವೆ. ಸುಕುಮಾರನು ಆ ದೃಶ್ಯಗಳನ್ನು ನೋಡುತ್ತಾ ಅವುಗಳನ್ನು ಕೊಂಡಾಡಿ ಸಂತೋಷದಿಂದ ಕಾಲ ಕಳೆಯುತ್ತಾನೆ. ಪ್ರಕೃತಿಯ ಸೌಂದರ್ಯ ಮತ್ತು ರಾಜಕುಮಾರನ ಆನಂದವನ್ನು ಒಟ್ಟುಗೂಡಿಸಿ ಈ ಭಾಗವು ಮನೋಹರ ವಾತಾವರಣವನ್ನು ಸೃಷ್ಟಿಸುತ್ತದೆ.
Author
ಕವಿ: ಹರಿಹರ