ಪುಟ್ಟಹಕ್ಕಿ

This page features a video of the poem “ಪುಟ್ಟಹಕ್ಕಿ (Puttahakki)”, prescribed under the Karnataka State Syllabus for 9th Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಕಡ್ಡಿ ಕಡ್ಡಿ ಕೂಡಿಸಿ ಗೂಡು ಕಟ್ಟುವುದು ಪುಟ್ಟಹಕ್ಕಿ
ಬಿರುಗಾಳಿಯ ವಿರುದ್ಧ ಯುದ್ಧ ಸಾರುವುದು ಪುಟ್ಟಹಕ್ಕಿ
ಸುರಿವ ಸೋನೆ ಮಳೆಗೆ ಅಂಜಿ ಮನೆಯೊಳಗಡಗಿದವು
ಗೂಡಿನಿಂದ ಹೊರಬಂದು ಕುಣಿಯುತ ಜಳಕ ಮಾಡುವುದು ಪುಟ್ಟಹಕ್ಕಿ

ಕತ್ತಲೆ ಕಳೆದು ಬೆಳಕು ಹರಿದರೂ ನಿದ್ದೆಯಲಿ ಮುಳುಗಿರುವವು
ಸೂರ್ಯನನು ಸ್ವಾಗತಿಸುತ, ಗೀತೆಹಾಡುವುದು ಪುಟ್ಟಹಕ್ಕಿ
ಮೂಡಿದ ರೆಕ್ಕೆಗಳ ಮುರಿಯುವ ಜನರಿರುವರು ಜಗದಲಿ
ಅವರ ನಯನಾಂಬರದಲಿ ಹಾರೆಂದರೆ ಹೇಗೆ ಹಾರುವುದು ಪುಟ್ಟಹಕ್ಕಿ

ನೀವೆಷ್ಟು ತಡೆಗೋಡೆ ಕಟ್ಟಿದರೂ ಜಗದಂಗಳದಲಿ
ಆ ಮೂಲೆಯಿಂದ ಈ ಮೂಲೆಗೆ ಸದಾ ಹಾರುವುದು ಪುಟ್ಟಹಕ್ಕಿ
ಭೂಮಿಯಲಿ ಭುಜಂಗನ ಭಯ, ಆಕಾಶದಲಿ ಗಿಡುಗನ ಭಯ
ಆವರಿಸಿದ್ದರೂ ಅಳುಕದೆ ರೆಕ್ಕೆ ಬಿಚ್ಚಿ ಹಾರುವುದು ಪುಟ್ಟಹಕ್ಕಿ
Summary
ಈ ಕವನವು ಪುಟ್ಟಹಕ್ಕಿಯ ಪರಿಶ್ರಮ, ಧೈರ್ಯ ಮತ್ತು ಸ್ವಾತಂತ್ರ್ಯದ ಮನೋಭಾವವನ್ನು ಚಿತ್ರಿಸುತ್ತದೆ. ಅದು ಕಡ್ಡಿ ಕಡ್ಡಿ ಕೂಡಿಸಿ ಗೂಡು ಕಟ್ಟುತ್ತದೆ ಮತ್ತು ಬಿರುಗಾಳಿಯ ವಿರುದ್ಧ ಹೋರಾಡುತ್ತದೆ. ಮಳೆ ಬಂದಾಗ ಅಡಗಿಕೊಂಡರೂ ನಂತರ ಹೊರಬಂದು ಸಂತೋಷದಿಂದ ಜಳಕ ಮಾಡುತ್ತದೆ ಮತ್ತು ಸೂರ್ಯನನ್ನು ಸ್ವಾಗತಿಸುತ್ತದೆ. ಅದರ ರೆಕ್ಕೆಗಳನ್ನು ಮುರಿಯಲು ಪ್ರಯತ್ನಿಸುವವರಿದ್ದರೂ ಅದು ತಡೆಗೋಡೆಗಳನ್ನು ಲೆಕ್ಕಿಸದೆ ಹಾರಲು ಪ್ರಯತ್ನಿಸುತ್ತದೆ. ಭಯ ಮತ್ತು ಅಡೆತಡೆಗಳ ನಡುವೆಯೂ ಧೈರ್ಯದಿಂದ ಮುಂದೆ ಸಾಗಬೇಕು ಎಂಬ ಪ್ರೇರಣೆಯನ್ನು ಕವನ ನೀಡುತ್ತದೆ.
Author
ಕವಿ: ಜಂಬಣ್ಣ ಅಮರಚಿಂತ