ಬಿದಿರು

This page features a video of the poem “ಬಿದಿರು (Bidiru)”, prescribed under the Karnataka State Syllabus for 9th Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಬಿದಿರು (ನಾ) ಯಾರಿಗಲ್ಲದವಳು
ಹುಟ್ಟುತ ಹುಲ್ಲು ನಾನಾದೆ

ಬೆಳೆಬೆಳೆಯುತ್ತ ದಿವಿನಾದೆ
ಮಕ್ಕಳನು ತೂಗುವತೊಟ್ಟಿಲಾದೆ

ಪಲ್ಲಕ್ಕಿದಂಡಿಗೆಯಾದೆ
ಪತ್ರೆಗೆ ಬುಟ್ಟಿ ತಾನಾದೆ
ಮಹಾತ್ಮರ ಕೈಗೆ ಬೆತ್ತ ನಾನಾದೆ

ಕುಟ್ಟಲು ಒನಕೆಯಾದೆ
ಅಂಬಿಗಗೆ ಕೋಲು ತಾನಾದೆ
ರೈತನಿಗೆ ಬಿತ್ತುವ ಕೂರಿಗ್ಯಾದೆ

ಬೀಸುವ ಗೂಟವಾದೆ
ಕೇರುವ ಮರವಾದೆ
ಮುದುಕರಿಗೆ ಊರುವ ಬೆತ್ತವಾದೆ

ಆಡುವ ಕೋಲಾದೆ
ಹೂಡಲು ಚಕ್ಕಡಿಯಾದೆ
ಸಿದ್ದರಾಮೇಶಗೆ ನಂದಿ ಕೋಲಾದೆ

ನೆರಳಿಗೆ ಚಪ್ಪರವಾದೆ
ಏಕದಂಡಿಗೆ ಕೊಳವೆಯಾದೆ
ಶಿಶುನಾಳಾಧೀಶಗೆ ಓಲಗವಾದೆ

ಬಿದಿರು (ನಾ) ಯಾರಿಗಲ್ಲದವಳು
ಹುಟ್ಟುತ ಹುಲ್ಲು ನಾನಾದೆ
ಹುಟ್ಟುತ ಹುಲ್ಲು ನಾನಾದೆ
Summary
ಈ ಹಾಡು ಬಿದಿರಿನ ಬಹುಮುಖ ಉಪಯೋಗ ಮತ್ತು ಅದರ ಉಪಕಾರವನ್ನು ವಿವರಿಸುತ್ತದೆ. ಹುಲ್ಲಿನಂತೆ ಹುಟ್ಟಿ ಬೆಳೆದ ಬಿದಿರು ಮಕ್ಕಳ ತೊಟ್ಟಿಲು, ಪಲ್ಲಕ್ಕಿ, ಬುಟ್ಟಿ ಮತ್ತು ಮಹಾತ್ಮರ ಕೈಯಲ್ಲಿನ ಬೆತ್ತವಾಗಿ ವಿವಿಧ ರೂಪಗಳನ್ನು ಪಡೆಯುತ್ತದೆ. ರೈತನಿಗೆ ಸಾಧನ, ಮುದುಕರಿಗೆ ಊರುಗೋಲು ಮತ್ತು ಆಟಕ್ಕೆ ಕೋಲು ಮುಂತಾದ ಅನೇಕ ಕೆಲಸಗಳಿಗೆ ಅದು ನೆರವಾಗುತ್ತದೆ. ಚಪ್ಪರ, ಕೊಳವೆ ಮತ್ತು ವಾದ್ಯಗಳ ರೂಪದಲ್ಲಿಯೂ ಬಿದಿರು ಮಾನವನ ಜೀವನಕ್ಕೆ ಉಪಯುಕ್ತವಾಗುತ್ತದೆ. ಪ್ರಕೃತಿಯ ಸರಳ ವಸ್ತುವೂ ಅನೇಕ ರೀತಿಯಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸಬಹುದು ಎಂಬುದನ್ನು ಹಾಡು ಸಾರುತ್ತದೆ.
Author
ಕವಿ: ಶಿಶುನಾಳ ಶರೀಫ