This page features a video of the poem “ಸಿರಿಯನಿನ್ನೇನ ಬಣ್ಣಿಪೆನು (Siriyaninnena Bannipenu)”, prescribed under the Karnataka State Syllabus for 9th Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics
Kannada
ಬಿನ್ನಹ ಗುರುವೆ ಧ್ಯಾನಕೆ ಬೇಸರಾದಾಗ
ನಿನ್ನನಾದಿಯ ಮಾಡಿಕೊಂಡು
ಕನ್ನಡದೊಳಗೊಂದು ಕಥೆಯ ಪೇಳುವೆನದು
ನಿನ್ನಾಜ್ಞೆ ಕಂಡ ನನ್ನೊಡೆಯಾ
ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು
ರಯ್ಯಾ ಮಂಚಿದಿಯೆನೆ ತೆಲುಗ
ಅಯ್ಯಯ್ಯ ಎಂಚಪೊರ್ಲಾಂಡೆಂದು ತುಳುವರು
ಮೈಯ್ಯುಬ್ಬಿ ಕೇಳಬೇಕಣ್ಣ
ಭರತಭೂತಳಕೆ ಸಿಂಗಾರವಾದಯೋಧ್ಯಾ
ಪುರದೊಳು ಮೂಲೋಕ ಪೊಗಳೆ
ಭರತಚಕ್ರೇಶ್ವರ ಸುಖಬಾಳುತಿರ್ದನಾ
ಸಿರಿಯನಿನ್ನೇನ ಬಣ್ಣಿಪೆನು
ಪುರುಪರಮೇಶನ ಹಿರಿಯ ಕುಮಾರನು
ನರಲೋಕಕೊಬ್ಬನೆ ರಾಯ
ಮುರಿದು ಕಣ್ಣಿಟ್ಟರೆ ಕ್ಷಣಕೆ ಮುಕ್ತಿಯ ಕಾಂಬ
ಭರತ ಚಕ್ರಿಯ ಹೇಳಲಳವೇ
ಆ ವಿಭುವೊಂದಿನದುದಯದೊಳೆದ್ದು
ದೇವತಾರ್ಚನೆಯನು ಮಾಡಿ
ಚಾವಡಿಗೈದಿ ತಾನೋಲಗವಾದೊಂದು
ಶ್ರೀವಿಲಾಸವನೇನನೆಂಬೆ
ನವರತ್ನ ಹೇಮನಿರ್ಮಿತವೆನಿಪಾಸ್ಥಾನ
ಭವನದೊಳಾ ರಾಜರತ್ನ
ಛವಿವಡೆದೆಸೆದನು ರತ್ನಪುಷ್ಪಕದೊಳು
ದಿವಿಜೇಂದ್ರನೊಪ್ಪುವಂದದೊಳು
ತರತರವಿಡಿದು ಢಾಳಿಸುತಿಹ ದೀರ್ಘ ಚಾ
ಮರಗಳ ಸಾಲೊಳೆಸೆದನು
ಹರಿವ ಬೆಳ್ಮುಗಿಲೊಳು ತೋರಿ ಮರಸುವ
ಚಂದಿರನೊ ಭಾಸ್ಕರನೋಯೆಂಬಂತೆ
ಅಂಬುಜವೆಲ್ಲವು ರವಿಯ ನೋಳ್ಪಂತೆ ನೀ
ಲಾಂಬುಜ ನೋಳ್ಪಂತೆ ಶಶಿಯಾ
ತುಂಬಿದ ಸಭೆಯೆಲ್ಲ ನೃಪನ ನೋಡುವ ಮಿಕ್ಕ
ಹಂಬಲ ಮರೆದುದಲ್ಲಲ್ಲಿ
ನಿನ್ನನಾದಿಯ ಮಾಡಿಕೊಂಡು
ಕನ್ನಡದೊಳಗೊಂದು ಕಥೆಯ ಪೇಳುವೆನದು
ನಿನ್ನಾಜ್ಞೆ ಕಂಡ ನನ್ನೊಡೆಯಾ
ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು
ರಯ್ಯಾ ಮಂಚಿದಿಯೆನೆ ತೆಲುಗ
ಅಯ್ಯಯ್ಯ ಎಂಚಪೊರ್ಲಾಂಡೆಂದು ತುಳುವರು
ಮೈಯ್ಯುಬ್ಬಿ ಕೇಳಬೇಕಣ್ಣ
ಭರತಭೂತಳಕೆ ಸಿಂಗಾರವಾದಯೋಧ್ಯಾ
ಪುರದೊಳು ಮೂಲೋಕ ಪೊಗಳೆ
ಭರತಚಕ್ರೇಶ್ವರ ಸುಖಬಾಳುತಿರ್ದನಾ
ಸಿರಿಯನಿನ್ನೇನ ಬಣ್ಣಿಪೆನು
ಪುರುಪರಮೇಶನ ಹಿರಿಯ ಕುಮಾರನು
ನರಲೋಕಕೊಬ್ಬನೆ ರಾಯ
ಮುರಿದು ಕಣ್ಣಿಟ್ಟರೆ ಕ್ಷಣಕೆ ಮುಕ್ತಿಯ ಕಾಂಬ
ಭರತ ಚಕ್ರಿಯ ಹೇಳಲಳವೇ
ಆ ವಿಭುವೊಂದಿನದುದಯದೊಳೆದ್ದು
ದೇವತಾರ್ಚನೆಯನು ಮಾಡಿ
ಚಾವಡಿಗೈದಿ ತಾನೋಲಗವಾದೊಂದು
ಶ್ರೀವಿಲಾಸವನೇನನೆಂಬೆ
ನವರತ್ನ ಹೇಮನಿರ್ಮಿತವೆನಿಪಾಸ್ಥಾನ
ಭವನದೊಳಾ ರಾಜರತ್ನ
ಛವಿವಡೆದೆಸೆದನು ರತ್ನಪುಷ್ಪಕದೊಳು
ದಿವಿಜೇಂದ್ರನೊಪ್ಪುವಂದದೊಳು
ತರತರವಿಡಿದು ಢಾಳಿಸುತಿಹ ದೀರ್ಘ ಚಾ
ಮರಗಳ ಸಾಲೊಳೆಸೆದನು
ಹರಿವ ಬೆಳ್ಮುಗಿಲೊಳು ತೋರಿ ಮರಸುವ
ಚಂದಿರನೊ ಭಾಸ್ಕರನೋಯೆಂಬಂತೆ
ಅಂಬುಜವೆಲ್ಲವು ರವಿಯ ನೋಳ್ಪಂತೆ ನೀ
ಲಾಂಬುಜ ನೋಳ್ಪಂತೆ ಶಶಿಯಾ
ತುಂಬಿದ ಸಭೆಯೆಲ್ಲ ನೃಪನ ನೋಡುವ ಮಿಕ್ಕ
ಹಂಬಲ ಮರೆದುದಲ್ಲಲ್ಲಿ
Summary
ಈ ಕಾವ್ಯಭಾಗವು ಕನ್ನಡದಲ್ಲಿ ಕಥೆಯನ್ನು ಹೇಳುವ ಮೂಲಕ ಭರತ ಚಕ್ರವರ್ತಿಯ ವೈಭವವನ್ನು ವರ್ಣಿಸುತ್ತದೆ. ಕನ್ನಡಿಗರು, ತೆಲುಗರು ಮತ್ತು ತುಳುವರು ಮೆಚ್ಚುವಂತೆ ಭಾಷೆಯ ಸೊಗಸನ್ನು ಕವಿ ಪರಿಚಯಿಸುತ್ತಾನೆ. ಅಯೋಧ್ಯೆಯ ವೈಭವ, ಭರತ ಚಕ್ರೇಶ್ವರನ ರಾಜಮಹಿಮೆ ಮತ್ತು ಅವನ ಅಲಂಕೃತ ಸಭೆಯ ಸೌಂದರ್ಯವನ್ನು ವಿವರವಾಗಿ ಚಿತ್ರಿಸಲಾಗಿದೆ. ನವರತ್ನಗಳಿಂದ ಅಲಂಕರಿಸಲ್ಪಟ್ಟ ಅರಮನೆ, ಚಾಮರಗಳ ಸಾಲು ಮತ್ತು ಸಭೆಯ ಜನರ ಅಭಿಮಾನವು ರಾಜನ ವೈಭವವನ್ನು ಹೆಚ್ಚಿಸುತ್ತದೆ. ಈ ಭಾಗವು ಭಾಷೆಯ ಸೌಂದರ್ಯ, ರಾಜವೈಭವ ಮತ್ತು ಕಾವ್ಯಾತ್ಮಕ ವರ್ಣನೆಯ ಸಮನ್ವಯವನ್ನು ತೋರಿಸುತ್ತದೆ.
Author
ರತ್ನಾಕರವರ್ಣಿ