ಬೇಸಿಗೆ

This page features a video of the poem “ಬೇಸಿಗೆ (Besige)”, prescribed under the Karnataka State Syllabus for 6th Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಬಂದಿದೆ ಬೇಸಿಗೆ ರಜಾ
ಇದ್ದರೂ ಬಿಸಿಲಿನ ಸಜಾ
ಬನ್ನಿ ಆಡೋಣ, ಬನ್ನಿ ಆಡೋಣ,
ಸೂರ್ಯನ ಮಹಿಮೆಯ ಹಾಡೋಣ,

ಏಕೆ ರವಿಗಿಂತ ತಾಪ?
ಯಾರ ಮೇಲವನ ಕೋಪ?
ಎಂದು ಹಳಿಯಬೇಡಿ,
ಸೂರ್ಯನ ತಪ್ಪು ತಿಳಿಯಬೇಡಿ,
ಮೋಡ ಕೂಡಿಸಲು, ಇಳೆಗೆ ಮಳೆ ತರಲು
ದುಡಿಯುತಿಹನು, ಪಾಪ!

ಭೂಮಿಯ ಪೋಷಕ ಸೂರ್ಯ
ಭೂಮಿಗವನು ಅನಿವಾರ್ಯ
ಹೊಗಳಿಕೆ ಬೇಕಿಲ್ಲ,
ತೆಗಳಿದರೆ ಅವ ಕುಗ್ಗುವುದಿಲ್ಲ.
ಬೆಳಕ ನೀಡುವನು, ಬಿಸಿಯನೂಡುವನು
ಮರೆಯದೆ ಕರ್ತವ್ಯ.

ಇಂಥ ಬಿರು ಬಿಸಿಲಿನಲ್ಲಿ
ಮರಾ ಗಿಡಾ ಪೊದೆ ಬಳ್ಳಿ
ಕಂಗಾಲಾಗಿಲ್ಲ,
ನೋಡಿ ರಂಗಾಗಿವೆ ಎಲ್ಲ
ಚಿಗುರು ಹೂತೊಟ್ಟು, ಹಣ್ಣು ಮಿಡಿ ಬಿಟ್ಟು,
ಇವೆ ಸಂಭ್ರಮದಲ್ಲಿ.

ಸೂರ್ಯನಿಂದ ಕಲಿಯೋಣ.
ಪ್ರಕೃತಿಯಂತೆ ನಲಿಯೋಣ.
ಕಷ್ಟಗಳಿಗಂಜದೆ,
ನಮ್ಮ ಕರ್ತವ್ಯ ಮರೆಯದೆ,
ನಲಿಯುತ ಬಾಳಿ, ನಲಿವನು ಹಂಚಿ,
ಧನ್ಯತೆ ಗಳಿಸೋಣ.
Summary
ಈ ಹಾಡು ಬೇಸಿಗೆಯ ಬಿಸಿಲಿನ ನಡುವೆಯೂ ಸೂರ್ಯನ ಮಹತ್ವವನ್ನು ಅರಿಯುವಂತೆ ಮಾಡುತ್ತದೆ. ಸೂರ್ಯನು ಭೂಮಿಗೆ ಬೆಳಕು ಮತ್ತು ಉಷ್ಣವನ್ನು ನೀಡುವುದರ ಜೊತೆಗೆ ಮಳೆ ಬರಲು ಮತ್ತು ಪ್ರಕೃತಿಯ ಚಕ್ರ ಮುಂದುವರಿಯಲು ಸಹಾಯ ಮಾಡುತ್ತಾನೆ. ಅವನನ್ನು ದೂಷಿಸದೆ, ಅವನ ಕರ್ತವ್ಯವನ್ನು ಗೌರವಿಸಬೇಕು ಎಂದು ಹಾಡು ಹೇಳುತ್ತದೆ. ಬಿರುಬಿಸಿಲಿನಲ್ಲಿಯೂ ಮರಗಿಡಗಳು ಚಿಗುರಿ, ಹೂಬಿಟ್ಟು, ಹಣ್ಣು ನೀಡುತ್ತಾ ಸಂಭ್ರಮಿಸುತ್ತವೆ ಎಂಬುದನ್ನು ಕವಿ ಚಿತ್ರಿಸುತ್ತಾನೆ. ಸೂರ್ಯನಿಂದ ಕರ್ತವ್ಯನಿಷ್ಠೆಯನ್ನು ಕಲಿತು, ಪ್ರಕೃತಿಯಂತೆ ಸಂತೋಷದಿಂದ ಬದುಕಿ, ನಮ್ಮ ಕರ್ತವ್ಯವನ್ನು ಮರೆಯದೆ ಇತರರೊಂದಿಗೆ ಸಂತೋಷ ಹಂಚಿಕೊಳ್ಳಬೇಕು ಎಂಬ ಸಂದೇಶವನ್ನು ಹಾಡು ನೀಡುತ್ತದೆ.
Author
ಕವಿ: ಬಿ.ಆರ್. ಲಕ್ಷ್ಮಣರಾವ್