This page features a video of the poem “ಹೃದಯ ವಚನಗಳು (Hrudaya Vachanagalu)”, prescribed under the Karnataka State Syllabus for 6th Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics
Kannada
ಒಂಬತ್ತು ತಡವೆ ಉಪಕರಿಸಿ ಒಮ್ಮೆ ತಪ್ಪಲು, ಮೊದಲಿನೆಲ್ಲವ ಮರೆವರಯ್ಯ
ಹತ್ತು ಬಾರಿ ಮೆಚ್ಚಿ ಮತ್ತೊಂದು ಬಾರಿ ಟೀಕಿಸಲು, ಕೇರಳಿ ಜರೆವರಯ್ಯ
ಸ್ತುತಿಗೆ ತಲೆಯೊಲೆಯಿಸಿ ನಲಿದೊಲಿವುದಯ್ಯ
ಲೋಕ ಓಲೈಕೆಯ ಚಾಳಿಯ ದೂರೀಕರಿಸಯ್ಯ
ಸ್ತೋತ್ರಾತೀತ ಹೃದಯೇಶ ಸೋಮೇಶಾ||
ನೆಗೆವ ಹುಲ್ಲೆಯಾಗುವುದೊಮ್ಮೆ
ಮೊರೆವ ಹುಲಿಯಾಗುವುದೊಮ್ಮೆ
ಕೆನೆದು ಕುಪ್ಪಳಿಸುವ ಕುದುರೆಯಾಗುವುದೊಮ್ಮೆ
ಗಂಭೀರಗತಿಯ ಗಜವಾಗುವುದೊಮ್ಮೆ
ಗುಟುರುವ ಗೂಳಿಯಾಗುವುದೊಮ್ಮೆ
ಚಪಲತೆಯ ಕೋತಿಯಾಗುವುದೊಮ್ಮೆ
ನಂಜಿನ ನಾಗವಾಗುವುದೊಮ್ಮೆ
ನೀರೊಳಗೆ ನಿರಾಳವಿಹ ಮೀನಾಗುವುದೊಮ್ಮೆ
ಹೃದಯಕೆನಿತು ರೂಪಗಳೊ ಈ ಹದನವ ನೀನೆ ಬಲ್ಲೆ
ಬಹುರೂಪಿ ಹೃದಯೇಶ ಸೋಮೇಶಾ||
ಎನಿತು ಭಾಷೆಗಳ ಕಲಿತಡೇನು ಹೃದಯದ ಭಾಷೆ ಕಲಿಯದನ್ನಕ?
ಎನಿತು ನುಡಿ ಸಡಗರ ತೋರ್ದಡೇನು ಎದೆಯ ಮಿಡಿತವರಿಯದನ್ನಕ?
ಎನಿತು ಶೋಧನೆಗೈದಡೇನು ಹೃದಯ ಶೋಧನೆಗೈಯದನ್ನಕ?
ಎನಿತು ಸಾಧನೆಗೈದಡೇನು ಹೃದಯದ ಬೆಸುಗೆ ಸಾಧಿತವಾಗದನ್ನಕ?
ಇವೆಲ್ಲಕ್ಕೂ ಜೀವಭಾವದಾತ ನೀನೆ ಕಾಣ ಹೃದಯೇಶ ಸೋಮೇಶಾ||
ಹತ್ತು ಬಾರಿ ಮೆಚ್ಚಿ ಮತ್ತೊಂದು ಬಾರಿ ಟೀಕಿಸಲು, ಕೇರಳಿ ಜರೆವರಯ್ಯ
ಸ್ತುತಿಗೆ ತಲೆಯೊಲೆಯಿಸಿ ನಲಿದೊಲಿವುದಯ್ಯ
ಲೋಕ ಓಲೈಕೆಯ ಚಾಳಿಯ ದೂರೀಕರಿಸಯ್ಯ
ಸ್ತೋತ್ರಾತೀತ ಹೃದಯೇಶ ಸೋಮೇಶಾ||
ನೆಗೆವ ಹುಲ್ಲೆಯಾಗುವುದೊಮ್ಮೆ
ಮೊರೆವ ಹುಲಿಯಾಗುವುದೊಮ್ಮೆ
ಕೆನೆದು ಕುಪ್ಪಳಿಸುವ ಕುದುರೆಯಾಗುವುದೊಮ್ಮೆ
ಗಂಭೀರಗತಿಯ ಗಜವಾಗುವುದೊಮ್ಮೆ
ಗುಟುರುವ ಗೂಳಿಯಾಗುವುದೊಮ್ಮೆ
ಚಪಲತೆಯ ಕೋತಿಯಾಗುವುದೊಮ್ಮೆ
ನಂಜಿನ ನಾಗವಾಗುವುದೊಮ್ಮೆ
ನೀರೊಳಗೆ ನಿರಾಳವಿಹ ಮೀನಾಗುವುದೊಮ್ಮೆ
ಹೃದಯಕೆನಿತು ರೂಪಗಳೊ ಈ ಹದನವ ನೀನೆ ಬಲ್ಲೆ
ಬಹುರೂಪಿ ಹೃದಯೇಶ ಸೋಮೇಶಾ||
ಎನಿತು ಭಾಷೆಗಳ ಕಲಿತಡೇನು ಹೃದಯದ ಭಾಷೆ ಕಲಿಯದನ್ನಕ?
ಎನಿತು ನುಡಿ ಸಡಗರ ತೋರ್ದಡೇನು ಎದೆಯ ಮಿಡಿತವರಿಯದನ್ನಕ?
ಎನಿತು ಶೋಧನೆಗೈದಡೇನು ಹೃದಯ ಶೋಧನೆಗೈಯದನ್ನಕ?
ಎನಿತು ಸಾಧನೆಗೈದಡೇನು ಹೃದಯದ ಬೆಸುಗೆ ಸಾಧಿತವಾಗದನ್ನಕ?
ಇವೆಲ್ಲಕ್ಕೂ ಜೀವಭಾವದಾತ ನೀನೆ ಕಾಣ ಹೃದಯೇಶ ಸೋಮೇಶಾ||
Summary
ಈ ಹಾಡು ಮನುಷ್ಯನು ಲೋಕದ ಹೊಗಳಿಕೆ ಮತ್ತು ಟೀಕೆಗೆ ಅತಿಯಾಗಿ ಒಳಗಾಗದೆ ಸಮಚಿತ್ತದಿಂದ ಇರಬೇಕೆಂದು ಹೇಳುತ್ತದೆ. ಒಮ್ಮೆ ಮಾಡಿದ ಉಪಕಾರವನ್ನು ಜನರು ಮರೆತುಬಿಡಬಹುದು ಮತ್ತು ಅನೇಕ ಬಾರಿ ಮೆಚ್ಚಿದರೂ ಮತ್ತೆ ಟೀಕಿಸಬಹುದು ಎಂಬ ಮಾನವ ಸ್ವಭಾವವನ್ನು ಹಾಡು ತೋರಿಸುತ್ತದೆ. ಆದ್ದರಿಂದ ಸ್ತುತಿ ಮತ್ತು ಲೋಕದ ಓಲೈಕೆಯ ಹಿಂದೆ ಹೋಗದೆ, ಅದನ್ನು ಮೀರಿ ನಿಲ್ಲುವ ಹೃದಯವನ್ನು ಬೆಳೆಸಿಕೊಳ್ಳಬೇಕು ಎಂದು ಕವಿ ಸಲಹೆ ನೀಡುತ್ತಾನೆ. ಮನುಷ್ಯನ ಹೃದಯದಲ್ಲಿ ಹುಲ್ಲು, ಹುಲಿ, ಕುದುರೆ, ಆನೆ, ಗೂಳಿ, ಕೋತಿ, ನಾಗ ಮತ್ತು ಮೀನುಗಳಂತಹ ಅನೇಕ ರೂಪಗಳು ಮತ್ತು ಸ್ವಭಾವಗಳು ಅಡಗಿವೆ ಎಂದು ರೂಪಕವಾಗಿ ಹೇಳಲಾಗಿದೆ. ಅನೇಕ ಭಾಷೆಗಳನ್ನು ಕಲಿಯುವುದಕ್ಕಿಂತ ಹೃದಯದ ಭಾಷೆ, ಇತರರ ಭಾವನೆ ಮತ್ತು ಪ್ರೀತಿಯ ಬಂಧವನ್ನು ಅರಿಯುವುದು ಮುಖ್ಯ ಎಂಬುದೇ ಹಾಡಿನ ಅಂತಿಮ ಸಂದೇಶವಾಗಿದೆ.
Author
ಅಮೃತ ಸೋಮೇಶ್ವರ