This page features a video of the poem “ನೀ ಹೋದ ಮರುದಿನ (Ni Hoda Marudina)”, prescribed under the Karnataka State Syllabus for 6th Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics
Kannada
ನೀ ಹೋದ ಮರುದಿನ ಮೊದಲಂಗೆ ನಮ ಬದುಕು
ಆಗ್ಯಾದೋ ಬಾಬಾ ಸಾಹೇಬ
ನಿನ್ನಂಗ ದುಡಿದವರು ಕಳಕಳಿಯ ಪಡುವವರು
ಇನ್ನುತನ ಬರಲಿಲ್ಲ ಒಬ್ಬ
ಪ್ರತಿನಿತ್ಯ ಎದ್ದಾಗ ನಮಸುದ್ದಿ ಸಂಭ್ರಮವು
ದೇಕುವುದು ತಪ್ಪಿಲ್ಲ ನಮಗ
ಹೋದ ಹೋದಲ್ಲೆಲ್ಲ ಮೇಲವರ ಆಟಗಳು
ಉರಿಹಚ್ಚಿ ಬಿಡುತಾರ ಒಳಗ
ಎಲ್ಲಿ ಕೇಳಿದರಲ್ಲಿ ಬೂಟುಗಾಲಿನ ಸದ್ದು
ತರತರದ ನೋವುಗಳು ನಮಗ
ತಮ್ಮಂಗ ಇರದಿದ್ರೆ ತಲೆ ಕಡಿದು ಹಾಕುವರು
ಹೆಸರಿಗೆ ಸ್ವಾತಂತ್ರ್ಯ ನಮಗ
ಕೈಕಾಲು ಕಿವಿ ಮೂಗು ಮೈ ಮನಸು ತಲೆ ಕಣ್ಣು
ಕಳಕೊಂಡ ಬರಡು ಗಿಡ ನಾವು
ಮೈ ತುಂಬ ಮನತುಂಬ ಸಿಕ್ಕವರ ಮುಖಮುದ್ರೆ
ಚೀರಾಟ ಹಾರಟ ಸಾವೋ
ಹೋಗ್ಬಾರೋ ದಾರಿಯಲಿ ಅಡುಗಲ್ಲುಗಳು ಸೇರಿ
ಮುಳಕಲ್ಲು ಹಾಸ್ಯಾವೊ ಪೂರ
ಹೆಚ್ಚಿಗೆ ಬೆಳೆದವರ ಉಳಿದವರ ಜೀವಗಳ
ಹಗಲಾಗ ಹೊಡೆದಾರ ಟಾರಾ
ಎಷ್ಟಂತ ಉರಿತಾರ ಎಷ್ಟಂತ ಹರಿತಾರ
ತಾಳದಕ್ಕೂ ಮಿತಿಯುಂಟು ಇಲ್ಲಿ
ತಾಳಿ ತಾಳಿಯೂ ಒಮ್ಮೆ ಚೇಳಾಗಿ ಕುಟುಕುವನು
ಸಾಮಾನ್ಯನಲ್ಲೋ ಬಡಜೀವಿ
ದುಡಿದುಡಿದು ಹುಟ್ಟಿರಲು ಕತ್ತಲಿರುವಾ ತನಕ
ಕೊತ್ತಿಗಳು ಹೊತ್ಯಾವ ಜೋರಾ
ರೋಡಿಗಿದ್ದವರೆಲ್ಲಾ ಗ್ವಾಡ್ಯಾಗ ಕುಂತಾರ
ಇನ್ನಿಲ್ಲ ನಮ ದಾರಿ ದೂರ
ಬಾಬಾ ಸಾಹೇಬರೇನು ಹುಚ್ಚರಲ್ಲವೇ ಅಲ್ಲ
ಗಾಂಧಿಜೊತೆ ಇರಲಿಲ್ಲ ಸುಮ್ಮ
ಅಷ್ಟು ಒದ್ದಾಡಿದಕೆ ಇಂಗೈತೆ ನಮ್ ಬದುಕು
ತಿಳಿಯೀತೆ ಈಗ್ಲಾದ್ರೂ ತಮ್ಮ
ಆಗ್ಯಾದೋ ಬಾಬಾ ಸಾಹೇಬ
ನಿನ್ನಂಗ ದುಡಿದವರು ಕಳಕಳಿಯ ಪಡುವವರು
ಇನ್ನುತನ ಬರಲಿಲ್ಲ ಒಬ್ಬ
ಪ್ರತಿನಿತ್ಯ ಎದ್ದಾಗ ನಮಸುದ್ದಿ ಸಂಭ್ರಮವು
ದೇಕುವುದು ತಪ್ಪಿಲ್ಲ ನಮಗ
ಹೋದ ಹೋದಲ್ಲೆಲ್ಲ ಮೇಲವರ ಆಟಗಳು
ಉರಿಹಚ್ಚಿ ಬಿಡುತಾರ ಒಳಗ
ಎಲ್ಲಿ ಕೇಳಿದರಲ್ಲಿ ಬೂಟುಗಾಲಿನ ಸದ್ದು
ತರತರದ ನೋವುಗಳು ನಮಗ
ತಮ್ಮಂಗ ಇರದಿದ್ರೆ ತಲೆ ಕಡಿದು ಹಾಕುವರು
ಹೆಸರಿಗೆ ಸ್ವಾತಂತ್ರ್ಯ ನಮಗ
ಕೈಕಾಲು ಕಿವಿ ಮೂಗು ಮೈ ಮನಸು ತಲೆ ಕಣ್ಣು
ಕಳಕೊಂಡ ಬರಡು ಗಿಡ ನಾವು
ಮೈ ತುಂಬ ಮನತುಂಬ ಸಿಕ್ಕವರ ಮುಖಮುದ್ರೆ
ಚೀರಾಟ ಹಾರಟ ಸಾವೋ
ಹೋಗ್ಬಾರೋ ದಾರಿಯಲಿ ಅಡುಗಲ್ಲುಗಳು ಸೇರಿ
ಮುಳಕಲ್ಲು ಹಾಸ್ಯಾವೊ ಪೂರ
ಹೆಚ್ಚಿಗೆ ಬೆಳೆದವರ ಉಳಿದವರ ಜೀವಗಳ
ಹಗಲಾಗ ಹೊಡೆದಾರ ಟಾರಾ
ಎಷ್ಟಂತ ಉರಿತಾರ ಎಷ್ಟಂತ ಹರಿತಾರ
ತಾಳದಕ್ಕೂ ಮಿತಿಯುಂಟು ಇಲ್ಲಿ
ತಾಳಿ ತಾಳಿಯೂ ಒಮ್ಮೆ ಚೇಳಾಗಿ ಕುಟುಕುವನು
ಸಾಮಾನ್ಯನಲ್ಲೋ ಬಡಜೀವಿ
ದುಡಿದುಡಿದು ಹುಟ್ಟಿರಲು ಕತ್ತಲಿರುವಾ ತನಕ
ಕೊತ್ತಿಗಳು ಹೊತ್ಯಾವ ಜೋರಾ
ರೋಡಿಗಿದ್ದವರೆಲ್ಲಾ ಗ್ವಾಡ್ಯಾಗ ಕುಂತಾರ
ಇನ್ನಿಲ್ಲ ನಮ ದಾರಿ ದೂರ
ಬಾಬಾ ಸಾಹೇಬರೇನು ಹುಚ್ಚರಲ್ಲವೇ ಅಲ್ಲ
ಗಾಂಧಿಜೊತೆ ಇರಲಿಲ್ಲ ಸುಮ್ಮ
ಅಷ್ಟು ಒದ್ದಾಡಿದಕೆ ಇಂಗೈತೆ ನಮ್ ಬದುಕು
ತಿಳಿಯೀತೆ ಈಗ್ಲಾದ್ರೂ ತಮ್ಮ
Summary
ಈ ಹಾಡು ಬಾಬಾ ಸಾಹೇಬರ ಅಗಲಿಕೆಯ ನಂತರ ಸಾಮಾನ್ಯ ಜನರ ಬದುಕಿನಲ್ಲಿ ಉಳಿದ ನೋವು ಮತ್ತು ಅನ್ಯಾಯವನ್ನು ವ್ಯಕ್ತಪಡಿಸುತ್ತದೆ. ದುಡಿಯುವ ಜನರು ಶೋಷಣೆ, ಭಯ, ಹಿಂಸೆ ಮತ್ತು ಅಸಮಾನತೆಯಿಂದ ಬಳಲುತ್ತಿರುವ ಚಿತ್ರಣ ಇಲ್ಲಿ ಕಾಣುತ್ತದೆ. ಹೆಸರಿಗೆ ಸ್ವಾತಂತ್ರ್ಯ ಇದ್ದರೂ ಬಡಜನರಿಗೆ ನಿಜವಾದ ಸ್ವಾತಂತ್ರ್ಯ ಮತ್ತು ನೆಮ್ಮದಿ ಸಿಗದ ಸ್ಥಿತಿಯನ್ನು ಹಾಡು ಪ್ರಶ್ನಿಸುತ್ತದೆ. ದೇಹ ಮತ್ತು ಮನಸ್ಸಿನ ಮೇಲೆ ಬಿದ್ದಿರುವ ನೋವುಗಳು ಹಾಗೂ ಬದುಕಿನ ದಾರಿಯಲ್ಲಿ ಎದುರಾಗುವ ಅಡೆತಡೆಗಳನ್ನು ಕವಿ ತೀವ್ರವಾಗಿ ಹೇಳುತ್ತಾನೆ. ಬಾಬಾ ಸಾಹೇಬರು ಮತ್ತು ಗಾಂಧೀಜಿಯಂತಹ ನಾಯಕರ ಹೋರಾಟದ ಅರ್ಥವನ್ನು ಜನರು ಅರಿತು, ತಮ್ಮ ಬದುಕಿನ ಸ್ಥಿತಿಯನ್ನು ಬದಲಿಸಿಕೊಳ್ಳಬೇಕು ಎಂಬ ಆಶಯ ಹಾಡಿನಲ್ಲಿ ವ್ಯಕ್ತವಾಗುತ್ತದೆ.
Author
ಚೆನ್ನಣ್ಣ ವಾಲೀಕಾರ