ಗಂಗವ್ವ ತಾಯಿ

This page features a video of the poem “ಗಂಗವ್ವ ತಾಯಿ (Gangavva Tayi)”, prescribed under the Karnataka State Syllabus for 6th Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಬಾ ತಾಯಿ ಬಾ ತಾಯಿ
ಬಾರವ್ವ ತಾಯಿ
ಗಂಗವ್ವ ತಾಯಿ
ನೀರವ್ವ ತಾಯಿ

ನೆಲದ ಕಣ ಕಣದಾಗ
ಮನದ ಪದ ಪದರಾಗ
ತುಂಬವ್ವ ತಾಯಿ
ಜೀವನಾ ನೀನೆಮಗೆ
ನೀಡವ್ವ ತಾಯಿ

ನೀನೊಬ್ಬಳಿದ್ದರೆ
ಜಗದಾಗ ನಭದಾಗ
ಜಳ ಜಳ ಜಳ ಜಳ
ಜಲ ಜಲ ತಾಯಿ
ಹೊಳೆಯವ್ವ ತಾಯಿ
ನೀರವ್ವ ತಾಯಿ

ಬಾರವ್ವ ತಾಯಿ
ಗಂಗವ್ವ ತಾಯಿ
ಬಾ ತಾಯಿ ಬಾ ತಾಯಿ
ನೀರವ್ವ ತಾಯಿ

ನೆಲದ ಒಳಹೊರಗೆಲ್ಲ
ಪ್ರಾಣದಾ ತುಂಬೆಲ್ಲ
ನಗುನಗುತ ನಲಿಯುತ್ತ
ಪುಟಿಯುತ್ತ ಕುಣಿಯುತ್ತ
ಚಿಮ್ಮುತ್ತ ಜಿಗಿಯುತ್ತ
ಹರಿಯುತ್ತ ಸುರಿಯುತ್ತ
ಧೋ ಧೋ ಬಾರವ್ವ
ನೀರವ್ವ ಬಾರವ್ವ

ಒಣಗಿದ ನೆಲದಾಗ
ಹಸಿ ಹಸಿರು ನೆಡಲಾಕ
ಉಸಿರುಸಿರು ಉಳಿಸಾಕ
ಕೊಳೆಯೆಲ್ಲ ತೊಳಿಯಾಕ

ಬಾರವ್ವ ತಾಯಿ
ಗಂಗವ್ವ ತಾಯಿ
ಬಾ ತಾಯಿ ಬಾ ತಾಯಿ
ನೀರವ್ವ ತಾಯಿ

ಭರಭರ ಥರಥರ
ಜೀವದಾ ತುಣುಕಾಗಿ
ಮೈ ಮನಸ ಹೊಲಸೆಲ್ಲ
ತೊಳಿಯವ್ವ ತಾಯಿ
ನೀರವ್ವ ತಾಯಿ
ಗಂಗವ್ವ ತಾಯಿ

ಬಾರವ್ವ ತಾಯಿ
ಗಂಗವ್ವ ತಾಯಿ
ಬಾ ತಾಯಿ ಬಾ ತಾಯಿ
ನೀರವ್ವ ತಾಯಿ

ನೀರವ್ವ ಗಂಗವ್ವ
ಮಳಿಯಾಗಿ ಬಾರವ್ವ
ಹೊಳಿಯಾಗಿ ಹರಿಯವ್ವ
ಒಣಗೀದ ನೆಲದಾಗ
ಹಸುರಾಗಿ ಹೊಳಿಯವ್ವ
ಕಲಕಲ ನದಿಯಾಗಿ
ಹನಿ ಹನಿ ಕಣ ಕಣ

ಬಾ ತಾಯಿ ಬಾ ತಾಯಿ
ಬಾರವ್ವ ತಾಯಿ
ಗಂಗವ್ವ ತಾಯಿ
Summary
ಈ ಹಾಡು ನೀರನ್ನು ತಾಯಿಯಂತೆ ಕರೆದಾಡುತ್ತಾ ಭೂಮಿಗೆ ಜೀವ ನೀಡುವ ಜಲದ ಮಹತ್ವವನ್ನು ಕೊಂಡಾಡುತ್ತದೆ. ಗಂಗವ್ವ ಮತ್ತು ನೀರವ್ವ ಎಂಬ ರೂಪಕಗಳ ಮೂಲಕ ನೀರು ನೆಲದ ಕಣಕಣದಲ್ಲೂ ಮತ್ತು ಮನದ ಪದಪದರಲ್ಲೂ ತುಂಬಬೇಕು ಎಂದು ಹಾಡು ಪ್ರಾರ್ಥಿಸುತ್ತದೆ. ನೀರು ಹರಿದು, ಸುರಿದು, ಚಿಮ್ಮಿ, ಜಿಗಿದು ಒಣಗಿದ ನೆಲವನ್ನು ಹಸಿರಾಗಿಸಬೇಕು ಎಂಬ ಆಶಯವನ್ನು ವ್ಯಕ್ತಪಡಿಸುತ್ತದೆ. ನೀರು ಮಣ್ಣು ಮತ್ತು ಜೀವಜಗತ್ತನ್ನು ಶುದ್ಧಗೊಳಿಸಿ, ಗಿಡಮರಗಳನ್ನು ಬೆಳೆಸಲು ಹಾಗೂ ಜೀವವನ್ನು ಉಳಿಸಲು ಅಗತ್ಯವಾಗಿದೆ ಎಂದು ಹಾಡು ಸೂಚಿಸುತ್ತದೆ. ಮಳೆಯಾಗಿ ಬಂದು, ಹೊಳೆಯಾಗಿ ಹರಿದು, ನದಿಯಾಗಿ ಕಲಕಲಿಸುವ ನೀರು ಎಲ್ಲೆಡೆ ಜೀವ ಮತ್ತು ಸಂತೋಷವನ್ನು ತುಂಬಲಿ ಎಂಬುದು ಹಾಡಿನ ಮುಖ್ಯ ಆಶಯವಾಗಿದೆ.
Author
ಕವಿ: ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ