This page features a video of the poem “ಮಗು ಮತ್ತು ಹಣ್ಣುಗಳು (Magu Mattu Hannugalu)”, prescribed under the Karnataka State Syllabus for 6th Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics
Kannada
ಹಣ್ಣಿನಂಗಡಿ ಮುಂದೆ ಕಣ್ಣರಳಿಸುವ ಮಗು
ಇಲ್ಲಿ ಈ ತಿರುವಲ್ಲಿ ಥಟ್ಟನವತರಿಸಿದ ಕಪ್ಪು ಲಾರಿಯ ಹಾಗೆ
ಗಾಳಿ ಕೀಟಲೆ ಉಗುರೊ
ತುಂಟರೆಸೆಯುವ ಕಲ್ಲೋ
ಕಾಯಿಯಲ್ಲೇ ನಿನ್ನ ಕೆಡವದಿರಲಿ
ಹಣ್ಣಿನಂಗಡಿಯಾಗು ನೀನೂನು
ಗಿರವಿಯಂಗಡಿ ಗುಜರಿಗಳ ಧೂಳು ಹಬ್ಬಿದ
ಊರ ಮಾರುಕಟ್ಟೆಯ ನಡುವೆ
ಹಣ್ಣಾಗಬೇಕು ಮಗು
ಮೈಯೆಲ್ಲ ಮಾಗಿಹುಣ್ಣಿನ ಸುಕ್ಕು ಬರುವವರೆಗೆ
ಪಕ್ವತನ ಬಿರಿದ ಬಾಳೆಹಣ್ಣಿದೆಯಲ್ಲ
ಅದರ ಹಾಗೇ ಕೊಂಚ ಬಾಗಬೇಕು
ಕೊಬ್ಬಿದರೆ ಚಕೋತನೆಯ ಹಾಗೆ
ಕುಗ್ಗಿದರೆ ನಿಂಬೆ ಹಣ್ಣಿನ ಹಾಗೆ
ಹುಳಿಗಟ್ಟುವುದು ನಿನ್ನೊಳಗೆ
ಸರಿಗಾತ್ರವಾಗಿ ಸಮನಿಸಲಿ ನಿನ್ನತನ
ಕಿತ್ತಲೆಯ ಹಾಗೆ, ಮೋಸಂಬಿ ಹಾಗೆ
ರಸಪೂರಿ ಮಾವಿನ ಹಣ್ಣಿನಂತೆ
ಅಂಜೂರದಂತೆ ಅಪರೂಪವಾಗು ಜನರ ಕಣ್ಣಿಗೆ
ಕಂಡರೆ ಕಾಣು ಕಲ್ಲಂಗಡಿಯಾಗಿ
ಬೇಸಿಗೆಯ ಕಮರಿರುವ ಕಣ್ಣುಗಳಿಗೆ
ದಳದಳಕೊಯ್ದು ಅರಳಿಸಿದ ದಾಳಿಂಬೆಯೊಳಗೆ
ಥಳಥಳ ಕೆಂಡ ಬಣ್ಣ ಮಣಿಮಣಿ
ಹನಿಹನಿ ತನಿರಸದ ಖನಿಯಾಗು;
ಹಬ್ಬಿಕೋ ದ್ರಾಕ್ಷಿ ಬಳ್ಳಿಯ ಹಾಗೆ
ಆಯುಷ್ಯೆ ಚಪ್ಪರದ ಉದ್ದಗಲ;
ತಬ್ಬಿಕೋ ಬಿಡಬೇಡ;
ಹಣ್ಣು ತೊಡಿಸಲು ನಿನಗೆ
ತಾನೆ ಮಣ್ಣಾಗುತ-ಬರಲು ತೋಟಗಾತಿ
ಬೆಲೆಯ ರಾಕೆಟ್ಟು ಯಾನ ಹೊರಡದಿರು
ಸೇಬು ಹಣ್ಣಿನ ಜೊತೆಗೆ
ಎಲ್ಲರಿಗೂ ದಕ್ಕುವ ಎಲಚಿಯಾಗು
ಇಲ್ಲಿ ಈ ತಿರುವಲ್ಲಿ ಥಟ್ಟನವತರಿಸಿದ ಕಪ್ಪು ಲಾರಿಯ ಹಾಗೆ
ಗಾಳಿ ಕೀಟಲೆ ಉಗುರೊ
ತುಂಟರೆಸೆಯುವ ಕಲ್ಲೋ
ಕಾಯಿಯಲ್ಲೇ ನಿನ್ನ ಕೆಡವದಿರಲಿ
ಹಣ್ಣಿನಂಗಡಿಯಾಗು ನೀನೂನು
ಗಿರವಿಯಂಗಡಿ ಗುಜರಿಗಳ ಧೂಳು ಹಬ್ಬಿದ
ಊರ ಮಾರುಕಟ್ಟೆಯ ನಡುವೆ
ಹಣ್ಣಾಗಬೇಕು ಮಗು
ಮೈಯೆಲ್ಲ ಮಾಗಿಹುಣ್ಣಿನ ಸುಕ್ಕು ಬರುವವರೆಗೆ
ಪಕ್ವತನ ಬಿರಿದ ಬಾಳೆಹಣ್ಣಿದೆಯಲ್ಲ
ಅದರ ಹಾಗೇ ಕೊಂಚ ಬಾಗಬೇಕು
ಕೊಬ್ಬಿದರೆ ಚಕೋತನೆಯ ಹಾಗೆ
ಕುಗ್ಗಿದರೆ ನಿಂಬೆ ಹಣ್ಣಿನ ಹಾಗೆ
ಹುಳಿಗಟ್ಟುವುದು ನಿನ್ನೊಳಗೆ
ಸರಿಗಾತ್ರವಾಗಿ ಸಮನಿಸಲಿ ನಿನ್ನತನ
ಕಿತ್ತಲೆಯ ಹಾಗೆ, ಮೋಸಂಬಿ ಹಾಗೆ
ರಸಪೂರಿ ಮಾವಿನ ಹಣ್ಣಿನಂತೆ
ಅಂಜೂರದಂತೆ ಅಪರೂಪವಾಗು ಜನರ ಕಣ್ಣಿಗೆ
ಕಂಡರೆ ಕಾಣು ಕಲ್ಲಂಗಡಿಯಾಗಿ
ಬೇಸಿಗೆಯ ಕಮರಿರುವ ಕಣ್ಣುಗಳಿಗೆ
ದಳದಳಕೊಯ್ದು ಅರಳಿಸಿದ ದಾಳಿಂಬೆಯೊಳಗೆ
ಥಳಥಳ ಕೆಂಡ ಬಣ್ಣ ಮಣಿಮಣಿ
ಹನಿಹನಿ ತನಿರಸದ ಖನಿಯಾಗು;
ಹಬ್ಬಿಕೋ ದ್ರಾಕ್ಷಿ ಬಳ್ಳಿಯ ಹಾಗೆ
ಆಯುಷ್ಯೆ ಚಪ್ಪರದ ಉದ್ದಗಲ;
ತಬ್ಬಿಕೋ ಬಿಡಬೇಡ;
ಹಣ್ಣು ತೊಡಿಸಲು ನಿನಗೆ
ತಾನೆ ಮಣ್ಣಾಗುತ-ಬರಲು ತೋಟಗಾತಿ
ಬೆಲೆಯ ರಾಕೆಟ್ಟು ಯಾನ ಹೊರಡದಿರು
ಸೇಬು ಹಣ್ಣಿನ ಜೊತೆಗೆ
ಎಲ್ಲರಿಗೂ ದಕ್ಕುವ ಎಲಚಿಯಾಗು
Summary
ಈ ಕವನವು ಮಗುವಿನ ಬೆಳವಣಿಗೆಯನ್ನು ವಿವಿಧ ಹಣ್ಣುಗಳ ಗುಣಗಳಿಗೆ ಹೋಲಿಸಿ ಸುಂದರವಾಗಿ ವಿವರಿಸುತ್ತದೆ. ಮಗು ಕಾಯಿ ಹಂತದಲ್ಲೇ ನಿಲ್ಲದೆ ಪಕ್ವವಾದ ಹಣ್ಣಿನಂತೆ ಜ್ಞಾನ, ಅನುಭವ ಮತ್ತು ಗುಣಗಳಲ್ಲಿ ಬೆಳೆಯಬೇಕು ಎಂದು ಕವಿ ಆಶಿಸುತ್ತಾನೆ. ದೇಹದ ಗಾತ್ರದಲ್ಲಿ ಅತಿಯಾಗಿ ಕೊಬ್ಬುವುದು ಅಥವಾ ಕುಗ್ಗುವುದು ಬೇಡ, ಸಮತೋಲನ ಮತ್ತು ಸರಿಯಾದ ಸ್ವಭಾವ ಹೊಂದಬೇಕು ಎಂಬ ಸಂದೇಶವಿದೆ. ಕಿತ್ತಳೆ, ಮೋಸಂಬಿ, ಮಾವು, ಅಂಜೂರ, ಕಲ್ಲಂಗಡಿ ಮತ್ತು ದಾಳಿಂಬೆ ಮುಂತಾದ ಹಣ್ಣುಗಳ ಮೂಲಕ ವಿಭಿನ್ನ ಉತ್ತಮ ಗುಣಗಳನ್ನು ಕವಿ ಸೂಚಿಸುತ್ತಾನೆ. ದ್ರಾಕ್ಷಿಬಳ್ಳಿಯಂತೆ ಜೀವನದಲ್ಲಿ ವಿಸ್ತರಿಸಿ, ಎಲ್ಲರಿಗೂ ದಕ್ಕುವ ಎಲಚಿಯಂತೆ ಉಪಯುಕ್ತ ಮತ್ತು ಪ್ರೀತಿಪಾತ್ರ ವ್ಯಕ್ತಿಯಾಗಬೇಕು ಎಂಬುದು ಕವನದ ಆಶಯವಾಗಿದೆ.
Author
ಎಚ್. ಎಸ್. ಶಿವಪ್ರಕಾಶ್