This page features a video of the poem “ಕಿತ್ತೂರ ಕೇಸರಿ (Kittura Kesari)”, prescribed under the Karnataka State Syllabus for 6th Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics
Kannada
ಕಟ್ಟುಕತೆ ಇದು ಅಲ್ಲ ದಿಟ್ಟ ಹೆಜ್ಜೆಯನಿಟ್ಟ
ವೀರವನಿತೆಯ ಚರಿತೆ ನೀವ್ ಕೇಳಿರಿಂದು
ಅನ್ನಕ್ಕೆ ಬಂದಿರುವ ಕುನ್ನಿಗಳ ಮನ್ನಿಸದೆ
ಸಮರ ಸಾರಿದ ರಾಣಿ ಜನಜನಿತವಿಂದು
ಮಲ್ಲಸಜ್ಜನ ಮನಕೆ ನೋವಾಗದಿರಬಹುದೆ?
ಹೋದರೀ ಸಿರಿನಾಡು ಪರಕೀಯರಾ ವಶಕೆ!
ಮಂಚಕ್ಕೆ ಒರಗಿರುವ ಕಿರಿಯರಸಿ ಚೆನ್ನಮ್ಮ
ಕನವರಿಸಿ ಕಟಕಟನೆ ಹಲ್ ಕಡಿದಳಾಕೆ
ತುತ್ತೂರಿ ಊದಿದಳು ಕಿತ್ತೂರು ಕಿರಿರಾಣಿ
ಬನ್ನಿರೈ ನನ್ನವರೆ ತಾಯ್ ಸೇವೆಗೆಂದು
ನಮ್ಮ ಅನ್ನವನುಂಡು ಕೊಬ್ಬಿರುವ ಕುನ್ನಿಗಳ
ಶಿರಮಾಲೆ ಕೊರಳೊಳಗೆ ಧರಿಸೋಣವೆಂದು
ಗುಡುಗಿದಳು ಸಿಡಿಲಂತೆ ಸಿಂಹದಾ ಧ್ವನಿಯಂತೆ
ಏಳಿರೈ, ಕೆಚ್ಚೆದೆಯ ಕಲಿಗಳೇ ನೀವು!
ಕರಿನೆಲದ ಗರಿಮೆಯನು ತೋರಿಸಲು ಬಿಳಿಯರಿಗೆ
ಛಲ ತೊಟ್ಟು ಹುಲಿಯಂತೆ ನುಗ್ಗೋಣ ನಾವು
ಅಮಟೂರು ಬಾಳಪ್ಪ, ಸಂಗೊಳ್ಳಿ ರಾಯಣ್ಣ
ಸಿಡಿಲಿನಾ ಕಿಡಿಯಂತೆ ಸಿಡಿದೆದ್ದರೊಡನೆ
ನಾಡ ರಕ್ಷಣೆಗಾಗಿ ಪ್ರಾಣವನ್ನು ಪಣಕಿಟ್ಟು
ರಾಜಗುರು ಕೃಪೆ ಪಡೆದು ಕಟ್ಟಿದರು ಸೇನೆ
ಆಕಾಶದೆತ್ತರಕೆ ಜಯಘೋಷ ಮೊಳಗಿಸುತ
ನುಗ್ಗಿದಳು ಚೆನ್ನಮ್ಮ ರಣಚಂಡಿಯಾಗಿ
ವೀರ ಯೋಧರ ಎದೆಗೆ ವಜ್ರಕವಚವ ಬಿಗಿದು
ಬೀಸುತ್ತಿದ್ದಳು ಖಡ್ಗ ತಾ ಮುಂದೆ ಸಾಗಿ
ತನ್ನಾತ್ಮ ಛಲದಿಂದ ಧರಿಸಿದಳು ಜಯಮಾಲೆ
ಸೋಲಾಯ್ತು ಮರುಕ್ಷಣವೆ ದುರ್ಮತಿಯರಿಂದ
ಮಮ್ಮಲನೆ ಮರುಗಿದಳು ಮನನೊಂದು ಕೊರಗಿದಳು
ತಾಯ್ ನೆಲದ ರಕ್ಷಣೆಯು ಕೈ ಮೀರಿತೆಂದು!
ಕಿತ್ತೂರ ಸಾಮ್ರಾಜ್ಯ ಕಟ್ಟುವನು ಇನ್ನೊಮ್ಮೆ
ದುಷ್ಟ ಅರಿಗಳ ಮೆಟ್ಟಿ ಈ ಮಾತು ಸತ್ಯ
ಸೆರೆಮನೆಯ ಸೇರಿದರು ಹಿಂಜರಿಯಲಿಲ್ಲೆನಿತು
ಕಲಿಗಳಿಗೆ ಕಿವಿಮಾತು ಹೇಳಿದಳು ನಿತ್ಯ
ನಿನ್ನ ಋಣ ತೀರಿಸಲು ನನಗಾಗಲಿಲ್ಲಮ್ಮ
ಈ ಒಂದೆ ಜನ್ಮದಲಿ ಕರುನಾಡ ಒಡತಿ
'ಮರುಜನ್ಮ ನೀಡೆನಗೆ ಹೆಣ್ಣಾಗಿ ಈ ನೆಲದಿ'
ಕಣ್ಮುಚ್ಚಿ ಬೇಡಿದಳು ಕಿತ್ತೂರ ಕೇಸರಿ!
ವೀರವನಿತೆಯ ಚರಿತೆ ನೀವ್ ಕೇಳಿರಿಂದು
ಅನ್ನಕ್ಕೆ ಬಂದಿರುವ ಕುನ್ನಿಗಳ ಮನ್ನಿಸದೆ
ಸಮರ ಸಾರಿದ ರಾಣಿ ಜನಜನಿತವಿಂದು
ಮಲ್ಲಸಜ್ಜನ ಮನಕೆ ನೋವಾಗದಿರಬಹುದೆ?
ಹೋದರೀ ಸಿರಿನಾಡು ಪರಕೀಯರಾ ವಶಕೆ!
ಮಂಚಕ್ಕೆ ಒರಗಿರುವ ಕಿರಿಯರಸಿ ಚೆನ್ನಮ್ಮ
ಕನವರಿಸಿ ಕಟಕಟನೆ ಹಲ್ ಕಡಿದಳಾಕೆ
ತುತ್ತೂರಿ ಊದಿದಳು ಕಿತ್ತೂರು ಕಿರಿರಾಣಿ
ಬನ್ನಿರೈ ನನ್ನವರೆ ತಾಯ್ ಸೇವೆಗೆಂದು
ನಮ್ಮ ಅನ್ನವನುಂಡು ಕೊಬ್ಬಿರುವ ಕುನ್ನಿಗಳ
ಶಿರಮಾಲೆ ಕೊರಳೊಳಗೆ ಧರಿಸೋಣವೆಂದು
ಗುಡುಗಿದಳು ಸಿಡಿಲಂತೆ ಸಿಂಹದಾ ಧ್ವನಿಯಂತೆ
ಏಳಿರೈ, ಕೆಚ್ಚೆದೆಯ ಕಲಿಗಳೇ ನೀವು!
ಕರಿನೆಲದ ಗರಿಮೆಯನು ತೋರಿಸಲು ಬಿಳಿಯರಿಗೆ
ಛಲ ತೊಟ್ಟು ಹುಲಿಯಂತೆ ನುಗ್ಗೋಣ ನಾವು
ಅಮಟೂರು ಬಾಳಪ್ಪ, ಸಂಗೊಳ್ಳಿ ರಾಯಣ್ಣ
ಸಿಡಿಲಿನಾ ಕಿಡಿಯಂತೆ ಸಿಡಿದೆದ್ದರೊಡನೆ
ನಾಡ ರಕ್ಷಣೆಗಾಗಿ ಪ್ರಾಣವನ್ನು ಪಣಕಿಟ್ಟು
ರಾಜಗುರು ಕೃಪೆ ಪಡೆದು ಕಟ್ಟಿದರು ಸೇನೆ
ಆಕಾಶದೆತ್ತರಕೆ ಜಯಘೋಷ ಮೊಳಗಿಸುತ
ನುಗ್ಗಿದಳು ಚೆನ್ನಮ್ಮ ರಣಚಂಡಿಯಾಗಿ
ವೀರ ಯೋಧರ ಎದೆಗೆ ವಜ್ರಕವಚವ ಬಿಗಿದು
ಬೀಸುತ್ತಿದ್ದಳು ಖಡ್ಗ ತಾ ಮುಂದೆ ಸಾಗಿ
ತನ್ನಾತ್ಮ ಛಲದಿಂದ ಧರಿಸಿದಳು ಜಯಮಾಲೆ
ಸೋಲಾಯ್ತು ಮರುಕ್ಷಣವೆ ದುರ್ಮತಿಯರಿಂದ
ಮಮ್ಮಲನೆ ಮರುಗಿದಳು ಮನನೊಂದು ಕೊರಗಿದಳು
ತಾಯ್ ನೆಲದ ರಕ್ಷಣೆಯು ಕೈ ಮೀರಿತೆಂದು!
ಕಿತ್ತೂರ ಸಾಮ್ರಾಜ್ಯ ಕಟ್ಟುವನು ಇನ್ನೊಮ್ಮೆ
ದುಷ್ಟ ಅರಿಗಳ ಮೆಟ್ಟಿ ಈ ಮಾತು ಸತ್ಯ
ಸೆರೆಮನೆಯ ಸೇರಿದರು ಹಿಂಜರಿಯಲಿಲ್ಲೆನಿತು
ಕಲಿಗಳಿಗೆ ಕಿವಿಮಾತು ಹೇಳಿದಳು ನಿತ್ಯ
ನಿನ್ನ ಋಣ ತೀರಿಸಲು ನನಗಾಗಲಿಲ್ಲಮ್ಮ
ಈ ಒಂದೆ ಜನ್ಮದಲಿ ಕರುನಾಡ ಒಡತಿ
'ಮರುಜನ್ಮ ನೀಡೆನಗೆ ಹೆಣ್ಣಾಗಿ ಈ ನೆಲದಿ'
ಕಣ್ಮುಚ್ಚಿ ಬೇಡಿದಳು ಕಿತ್ತೂರ ಕೇಸರಿ!
Summary
ಈ ಹಾಡು ಕಿತ್ತೂರಿನ ವೀರರಾಣಿ ಚೆನ್ನಮ್ಮನ ಧೈರ್ಯ, ಹೋರಾಟ ಮತ್ತು ದೇಶಪ್ರೇಮವನ್ನು ವರ್ಣಿಸುತ್ತದೆ. ಪರಕೀಯರ ವಿರುದ್ಧ ಸಮರ ಸಾರಿದ ಚೆನ್ನಮ್ಮ ತನ್ನ ಜನರನ್ನು ತಾಯ್ನಾಡಿನ ಸೇವೆಗೆ ಕರೆದು, ಶತ್ರುಗಳ ವಿರುದ್ಧ ಧೈರ್ಯದಿಂದ ಹೋರಾಡಲು ಪ್ರೇರೇಪಿಸುತ್ತಾಳೆ. ಅಮಟೂರು ಬಾಳಪ್ಪ ಮತ್ತು ಸಂಗೊಳ್ಳಿ ರಾಯಣ್ಣ ಸೇರಿದಂತೆ ವೀರರು ನಾಡಿನ ರಕ್ಷಣೆಗೆ ಪ್ರಾಣವನ್ನೇ ಪಣಕ್ಕಿಟ್ಟು ಸೇನೆ ಕಟ್ಟುತ್ತಾರೆ. ಚೆನ್ನಮ್ಮ ರಣಚಂಡಿಯಂತೆ ಮುನ್ನಡೆದು ವೀರಯೋಧರಿಗೆ ಧೈರ್ಯ ತುಂಬಿ ಖಡ್ಗ ಬೀಸುತ್ತಾಳೆ, ಆದರೆ ನಂತರ ದುರ್ಮತಿಗಳಿಂದ ಸೋಲನ್ನು ಅನುಭವಿಸುತ್ತಾಳೆ. ಸೆರೆಮನೆಯಲ್ಲಿದ್ದರೂ ಅವಳು ಹಿಂಜರಿಯದೆ ಕಿತ್ತೂರು ಸಾಮ್ರಾಜ್ಯವನ್ನು ಮತ್ತೆ ಕಟ್ಟುವ ನಂಬಿಕೆಯನ್ನು ಉಳಿಸಿಕೊಂಡು, ಕರುನಾಡಿನ ನೆಲದಲ್ಲಿ ಹೆಣ್ಣಾಗಿ ಮರುಜನ್ಮ ಪಡೆಯುವ ಆಶಯವನ್ನು ವ್ಯಕ್ತಪಡಿಸುತ್ತಾಳೆ.
Author
ಪ.ಗು. ಸಿದ್ದಾಪುರ