ಮಂಗಳ ಗ್ರಹದಲ್ಲಿ ಪುಟ್ಟಿ

This page features a video of the poem “ಮಂಗಳ ಗ್ರಹದಲ್ಲಿ ಪುಟ್ಟಿ (Mangala Grahadalli Putti)”, prescribed under the Karnataka State Syllabus for 6th Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಆಗಸದಲ್ಲಿ ಹಾರುವುದೆಂದರೆ
ಪುಟಾಣಿ ಪುಟ್ಟಿಗೆ ಬಲು ಇಷ್ಟ
ರೆಕ್ಕೆಗಳಿಲ್ಲದೆ ಹಾರಲು ಹೋದರೆ
ಆಗದೆ ತೊಂದರೆ? ಇದು ಕಷ್ಟ.

ಒಂದಿನ ಇದ್ದಕ್ಕಿದ್ದಂತೆ
ಪುಟ್ಟಿಗೆ ರೆಕ್ಕೆಯು ಬಂದಿತ್ತು.
ಹಕ್ಕಿಯ ಹಾಗೆ ಹಾರುವ ಮನಕೆ
ಹೆಚ್ಚಿನ ಹರುಷವ ತಂದಿತ್ತು.

ಕೂಡಲೆ ಪುಟ್ಟಿ ಠಣ್ಣನೆ ಜಿಗಿದು
ಆಗಸದೊಡಲಿಗೆ ಹಾರಿದಳು.
ಹಾರುತ ತೇಲುತ ಮುಂದಕೆ ಸಾಗಿ
ಚಂದ್ರನ ಮಡಿಲನು ಸೇರಿದಳು

ಚಂದ್ರನ ಮೇಲೆ ನೆಟ್ಟಗೆ ನಿಂತು
ಭೂಮಿಯ ಕಡೆಗೆ ನೋಡಿದರೆ
ನೇರಳೆ ಬಣ್ಣದ ಚೆಂಡಿನ ಹಾಗೆ
ಕಂಡಿತು ಅವಳಿಗೆ ನಮ್ಮ ಧರೆ.

ಚಂದ್ರನ ಬಿಟ್ಟು ಮೇಲಕೆ ಹಾರಿ
ಸೇರಲು ಮಂಗಳನಂಗಳವ
ಕೆಂಪಗೆ ಬಣಬಣಗುಟ್ಟುತಲಿತ್ತು
ಕಾಣಲಿಲ್ಲ ಯಾವುದೆ ಜೀವ

ಪುಟ್ಟಿಯು ಕಂಡಳು ಮಂಗಳನಲ್ಲಿ
'ಯೋಗಿ' ಹೆಸರಿನ ಹೆಬ್ಬಂಡೆ
ಒಡನೆ ಕೇಳಿದಳು ಕೆಂಪು ಬಂಡೆಯನು
'ನೀನು ಹೇಗೆ ಇಲ್ಲಿಗೆ ಬಂದೆ?'

ಬಂಡೆಯು ಕಣ್ಣೀರನು ಸುರಿಸುತ್ತಾ
ಹೇಳಿತು ಪುಟ್ಟಿಗೆ ನೋವಿನಲಿ
'ಪುಟ್ಟಿಯೇ, ನಮ್ಮೀ ಮಂಗಳ ಗ್ರಹದ
ದುರಂತ ಕಥೆಯನ್ನು ಕೇಳಿ ತಿಳಿ'

ಹಿಂದೊಂದು ಕಾಲದಿ ಈ ಗ್ರಹದಲ್ಲಿ
ಇತ್ತು ಜೀವಜಲ ಹಸಿರು ಮರ
ಆಗಿನ ಜನತೆಯು ನಾಡನು ಕಟ್ಟಲು
ಮರಗಳ ಕಡಿಯೆ ಬಂತು ಬರ

ಮಳೆ ಬೆಳೆ ಕಾಣದೆ ಜೀವಿಯು ಅಳಿದು
ಬಂದಿತು ನಮಗೆ ಇಂಥ ಸ್ಥಿತಿ
'ನಿಮ್ಮ ಭೂಮಿಯಲಿ ಗಿಡಮರ ಅಳಿದರೆ
ಮುಂದೆ ಒಂದು ದಿನ ಇದೇ ಗತಿ'

ಬಣಬಣಗುಟ್ಟುವ ಬಯಲನು ಕಂಡು
ಢವಢವಗುಟ್ಟಿತು ಎಳೆ ಹೃದಯ
ಹಸಿರನು ಅಳಿಸದೆ ಗಿಡಮರ ಬೆಳೆಸಿ
ಉಳಿಸುವೆವೆಂದಳು ಈ ಧರೆಯ

ಭೂಮಿಗೆ ಬಂದು ಜನತೆಯ ಕಂಡು
ಹಸಿರನು ಉಳಿಸಲು ಬೇಡಿದಳು
ತಾನು ಕೂಡ ಎಳೆ ಸಸಿಗಳ ನೆಟ್ಟು
ಬೆಳೆಸುತ ಕುಣಿ ಕುಣಿದಾಡಿದಳು.
Summary
ಈ ಹಾಡಿನಲ್ಲಿ ಪುಟ್ಟಿಯೆಂಬ ಬಾಲಕಿ ರೆಕ್ಕೆಗಳು ಬಂದ ನಂತರ ಆಕಾಶಕ್ಕೆ ಹಾರುವ ಕಲ್ಪನಾತ್ಮಕ ಸಾಹಸವನ್ನು ಕಾಣಬಹುದು. ಅವಳು ಚಂದ್ರನ ಬಳಿಗೆ ಹೋಗಿ ಅಲ್ಲಿಂದ ಭೂಮಿಯನ್ನು ನೋಡಿ ಅದರ ಸೌಂದರ್ಯವನ್ನು ಅನುಭವಿಸುತ್ತಾಳೆ. ನಂತರ ಮಂಗಳಗ್ರಹಕ್ಕೆ ಹೋಗಿ ಅಲ್ಲಿ ಜೀವವಿಲ್ಲದ ಬಯಲನ್ನು ಕಂಡು ಯೋಗಿ ಎಂಬ ಬಂಡೆಯ ದುಃಖದ ಕಥೆಯನ್ನು ಕೇಳುತ್ತಾಳೆ. ಮರಗಳನ್ನು ಕಡಿದು ಪ್ರಕೃತಿಯನ್ನು ನಾಶಮಾಡಿದ ಕಾರಣ ಮಳೆ ಮತ್ತು ಬೆಳೆ ಇಲ್ಲದೆ ಜೀವಿಗಳು ನಾಶವಾದವು ಎಂಬ ಎಚ್ಚರಿಕೆಯನ್ನು ಅವಳು ತಿಳಿದುಕೊಳ್ಳುತ್ತಾಳೆ. ಭೂಮಿಗೆ ಮರಳಿ ಹಸಿರನ್ನು ಉಳಿಸುವ ಸಂಕಲ್ಪ ಮಾಡಿ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ನೀಡುತ್ತಾಳೆ.
Author
ಕವಿ: ಸಿ. ಎಂ. ಗೋವಿಂದರೆಡ್ಡಿ